ಅಗ್ನಿಕುಲ

 ಪ್ರತೀಹಾರ ಸಾಮ್ರಾಜ್ಯ ನಾಶವಾದ ಮೇಲೆ ಪ್ರಾಬಲ್ಯಕ್ಕೆ ಬಂದ ಪರಮಾರರು (ಮಾಲ್ವ) ಚೌಳುಕ್ಯರು (ಗುಜರಾತ್) ಮತ್ತು ಚಾಹಮಾನರು (ರಾಜಪುತ್ರಸ್ಥಾನ)-ಇವರು ಮತ್ತು ಪ್ರತೀಹಾರರು ಅಬು ಪರ್ವತದ ಮೇಲಿದ್ದ ಹೋಮಾಗ್ನಿಕುಂಡದಿಂದ ಹುಟ್ಟಿ ಬಂದವರಾಗಿದ್ದು ಅಗ್ನಿಕುಲಕ್ಕೆ ಸೇರಿದವರು ಎಂಬ ಐತಿಹ್ಯ ಒಂದಿದೆ.  ಇವರೆಲ್ಲ ಮೂಲತಃ ಪರಕೀಯರಾಗಿದ್ದು ಅಗ್ನಿ ಸಂಸ್ಕಾರವಾದ ಮೇಲೆ ಹಿಂದೂಗಳಾದರೆಂಬುದಕ್ಕೆ ಆಧಾರ, ಚಾಂದ್ ಬಾರ್ದಾಯ್ ಕವಿಯ ಪೃಥ್ವಿರಾಜ್ ರಾಸೋ, ಪದ್ಮಗುಪ್ತನ ನವಶಶಾಂಕಚರಿತ ಮತ್ತು ಇತರ ಕೆಲವು ಪ್ರಶಸ್ತಿಗಳು. ಆದರೆ ಪೃಥ್ವಿರಾಜ್ ರಾಸೋದಲ್ಲಿ ಅನೇಕ ತಪ್ಪುಗಳಿವೆ. ಅಗ್ನಿಕುಲದ ಕತೆಯನ್ನು ಚಾಂದ್ ಬಾರ್ದಾಯ್ ಬರೆದಿರಲಾರ, ಅದು ಇತ್ತೀಚೆಗೆ ಸೇರಿಸಿದ್ದು ಎಂಬ ಅಭಿಪ್ರಾಯ ಬಲಗೊಂಡಿದೆ. ಅವರು ಪರಕೀಯರು ಎಂಬ ಖಚಿತವಾದ ಉಲ್ಲೇಖ ಪೃಥ್ವಿರಾಜ್ ರಾಸೋದಲ್ಲೇ ಎಲ್ಲೂ ಇಲ್ಲವಾಗಿ ಇತ್ತೀಚೆಗೆ ಈ ಅಭಿಪ್ರಾಯ ತಿರಸ್ಕøತವಾಗಿದೆ.              

(ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ